ಇಷ್ಟು ಹಣ ಸಿಕ್ಕರೆ ನೀವು ಏನ್ ಮಾಡ್ತಿರಿ?
”ಅದೊಂದು ಭಾರೀ ಬಹುಮಾನದ
ಸ್ಪರ್ಧೆ. ಗೆದ್ದವರ ಬ್ಯಾಂಕ್ ಅಕೌಂಟ್್ಗೆ ದಿನವೂ 86,400
ಅಮೆರಿಕನ್ ಡಾಲರ್ (ನಮ್ಮ ರೂಪಾಯಿಗಳ ಲೆಕ್ಕದಲ್ಲಿ
41.5 ಲಕ್ಷ) ಹಣವನ್ನು ಪ್ರತಿ
ದಿನವೂ ಹಾಕುವುದಾಗಿ
ಸ್ಪರ್ಧೆಯನ್ನು ಹಮ್ಮಿಕೊಂಡ ಕಂಪನಿ
ಘೋಷಿಸಿರುತ್ತದೆ. ಹಣದ ಮೇಲಿನ ಆಸೆಯಿಂದ
ಸ್ಪರ್ಧೆಯಲ್ಲಿ ನೀವೂ ಪಾಲ್ಗೊಳ್ಳುತ್ತೀರಿ.
ಆಗಲೇ, ಗೆಲುವೆಂಬುದು ನಿರಾಯಾಸವಾಗಿ ನಿಮ್ಮ
ಕೈ ಹಿಡಿದುಬಿಡುತ್ತದೆ. ಮರುದಿನದಿಂದಲೇ ನಿಮ್ಮ
ಬ್ಯಾಂಕ್ ಖಾತೆಗೆ 84,400 ಡಾಲರ್
ಹಣವನ್ನು ಹಾಕುವ ಕೆಲಸ ಆರಂಭವಾಗಬೇಕು. ಆ
ಸಂದರ್ಭದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡ ಸಂಸ್ಥೆ
ಐದು ಷರತ್ತುಗಳನ್ನು ಹಾಕುತ್ತದೆ. ಆ
ನಿಬಂಧನೆಗಳು ಹೀಗಿರುತ್ತವೆ:
1. ನಿಮ್ಮ ಅಕೌಂಟ್ ಗೆ ಹಾಕುವ 86,400 ಡಾಲರ್
ಹಣವನ್ನು ಅವತ್ತಿನದನ್ನು ಅವತ್ತೇ ಖರ್ಚು
ಮಾಡಿಬಿಡಬೇಕು. ನೀವೇನಾದರೂ ಬಾಕಿ
ಉಳಿಸಿದರೆ, ಅದನ್ನೆಲ್ಲ ಮುಲಾಜಿಲ್ಲದೆ ವಾಪಸ್
ಪಡೆಯಲಾಗುತ್ತದೆ.
2. ನಿಮಗೆ ಕೊಡುವ ಬಹುಮಾನದ
ಹಣವನ್ನು ನೀವು ಇನ್ನೊಬ್ಬರ ಅಕೌಂಟ್ ಗೆ
ವರ್ಗಾಯಿಸುವಂತಿಲ್ಲ.
3. ಬಹುಮಾನದ ರೂಪದಲ್ಲಿ ಬ್ಯಾಂಕ್ ಖಾತೆಗೆ
ದಿನದಿನ ಬಂದು ಬೀಳುವ ಅಷ್ಟೂ ಹಣಕ್ಕೆ
ನೀವು ಮಾತ್ರ ವಾರಸುದಾರರು.
3. ಪ್ರತಿ ದಿನವೂ ನೀವು ಹಾಸಿಗೆಯಿಂದ ಎದ್ದ
ತಕ್ಷಣವೇ, ಆ ದಿನದ ಮೊತ್ತವಾಗಿ ನಿಮ್ಮ ಅಕೌಂಟ್್ಗೆ
86,400 ಡಾಲರ್ ಹಣ ಸಂದಾಯವಾಗಿದೆ
ಎಂದು ತಿಳಿಸುವ ವ್ಯವಸ್ಥೆ ಮಾಡಲಾಗಿರುತ್ತದೆ.
4. ಯಾವುದೇ ರೀತಿಯ
ಮುನ್ಸೂಚನೆಯನ್ನೂ ಕೊಡದೆ ಈ ಬಹುಮಾನ
ನೀಡಿಕೆ ಯೋಜನೆಯನ್ನು ದಿಢೀರ್ ನಿಲ್ಲಿಸುವ
ಹಕ್ಕು ಬ್ಯಾಂಕ್್ಗಿರುತ್ತದೆ. ಯಾವ ಹೊತ್ತಿನಲ್ಲಿ
ಬೇಕಾದರೂ”ಅದು ಆಟ ನಿಲ್ಲಿಸಬಹುದು’
ಅದನ್ನು ಮೊದಲೇ ತಿಳಿಯುವ ಅಥವಾ ಪ್ರಶ್ನಿಸುವ
ಹಕ್ಕು ನಿಮಗಿರುವುದಿಲ್ಲ…
ಇಂಥದೊಂದು ಸಂದರ್ಭ ಅಕಸ್ಮಾತ್
ಎದುರಾಗಿಬಿಟ್ಟರೆ ಏನು ಮಾಡುತ್ತೀರಿ ಹೇಳಿ;
ಮೊದಲು ಮನೆ, ಕಾರು, ಜಮೀನು, ಚಿನ್ನ,
ಸೈಟು… ಹೀಗೆ ಏನೇನು ಬೇಕೋ ಅದನ್ನೆಲ್ಲ
ಖರೀದಿಸಿಬಿಡುತ್ತೀರಿ. ಇಂಥ ಎಲ್ಲ
ಖರೀದಿಯೂ ಕೇವಲ ಒಂದು ವಾರದಲ್ಲಿ ದಕ್ಕುವ
ಬಹುಮಾನದಿಂದಲೇ ಸಾಧ್ಯವಾಗಿಬಿಡುತ್ತದೆ. ಆಗ
ನೀವೇನು ಮಾಡುತ್ತೀರಿ ಹೇಳಿ: ನಿಧಾನವಾಗಿ
ಬಂಧುಗಳ ಕಡೆಗೆ ತಿರುಗುತ್ತೀರಿ.
ಹಣವೆಂಬುದು ಮೂಟೆಗಟ್ಟಲೆ ಬಂದು ಬೀಳುತ್ತಿದೆ.
ಖರ್ಚು ಮಾಡದೇ ಹೋದರೆ, ಅವತ್ತೇ ವಾಪಸ್
ಹೋಗಿಬಿಡುತ್ತದೆ ಎಂಬುದು ಗ್ಯಾರಂಟಿ
ಆಗಿರುವುದರಿಂದ, ಕೆಲವೊಂದು ಬಾರಿ
ಅಪರಿಚಿತರಿಗೂ ಅವರು ಕೇಳಿದ್ದನ್ನು ಕೊಡಿಸಲು
ಪ್ರಯತ್ನಿಸುತ್ತೇವೆ. ಅದೊಂದು ದಿನ ನಮ್ಮಿಂದ
ಏನನ್ನೂ ಪಡೆಯುವವರೇ ಇಲ್ಲವಾದಾಗ-
ಅಯ್ಯೋ, ಇವತ್ತು ಅನ್ಯಾಯವಾಗಿ 86,400
ಡಾಲರ್ ವೇಸ್ಟ್
ಆಗಿಬಿಡ್ತು ಎಂದು ಹತಾಶರಾಗುತ್ತೇವೆ.
ಡಿಯರ್ ಫ್ರೆಂಡ್ಸ್, ಈಗ ಹುಶಾರಾಗಿ ಕೇಳಿಸಿಕೊಳ್ಳಿ.:
ದಿನದಿನವೂ 86,400 ಡಾಲರ್ ಗಳನ್ನು ಗೆಲ್ಲುವ
ಸ್ಪರ್ಧೆಯಲ್ಲಿ ನಾವೆಲ್ಲರೂ ಇದ್ದೇವೆ. ಗೆಲ್ಲುವ
ಅವಕಾಶ ನಮ್ಮಲ್ಲಿ ಎಲ್ಲರಿಗೂ ಇದೆ. ಅಂದಹಾಗೆ, ಈ
ಸ್ಪರ್ಧೆಯನ್ನು ಹಮ್ಮಿಕೊಂಡಿರುವ ಸಂಸ್ಥೆಗೆ”ಕಾಲ’
ಎಂಬ ಹೆಸರಿದೆ. ಈ ಒಗಟಿನಂಥ ಕಥೆಯನ್ನು ಸರಳವಾಗಿ
ಹೇಳುವುದಾದರೆ ಅದು ಹೀಗೆ:
1. ಪ್ರತಿ ದಿನವೂ ಹಾಸಿಗೆಯಿಂದ ಏಳುತ್ತೇವಲ್ಲ?
ಆಗ 86,400 ಸೆಕೆಂಡುಗಳ ಅವಧಿ ಜೀವಿಸಲು ಇರುವ
ಬಹುಮಾನದ ಹಣದಂತೆ ನಮಗೆ ದಕ್ಕುತ್ತದೆ.
2. 86,400 ಸೆಕೆಂಡುಗಳ ಸಂಭ್ರಮವನ್ನೂ ರಾತ್ರಿ
ನಿದ್ರೆಗೆ ಜಾರುವುದರೊಳಗೆ
ನಾವು ಬಳಸಿಕೊಳ್ಳಬೇಕು. ಇಲ್ಲವಾದರೆ
ಅದು ಲೆಕ್ಕಕ್ಕೆ ಸಿಗದೆ ಮಾಯವಾಗುತ್ತದೆ.
3. ಕಳೆದುಹೋದ “ನಿನ್ನೆ’ ಎಂದಿಗೂ ಮರಳಿ
ಸಿಗುವುದಿಲ್ಲ.
4. ಇವತ್ತೇ ಕಡೆಯ
ದಿನವೇನೋ ಎಂದುಕೊಂಡೇ ಕ್ಷಣಕ್ಷಣವನ್ನೂ
ಖುಷಿಯಿಂದ ಬದುಕಬೇಕು.
5. ಪ್ರತಿ ಮುಂಜಾನೆಯೂ ನಮ್ಮ ಬದುಕಿನ ಅಕೌಂಟ್್ಗೆ
86,400 ಸೆಕೆಂಡುಗಳ ಸಂಭ್ರಮ ಬಂದು ಬೀಳುತ್ತೆ
ನಿಜ. ಆದರೆ, ಅದನ್ನು ಕಾಲ ಎಂಬ ನಿರ್ದಯ ಯಾವ
ಕ್ಷಣದಲ್ಲಿ ಬೇಕಾದರೂ ನಮ್ಮಿಂದ
ಕಿತ್ತುಕೊಳ್ಳಬಹುದು!
ಈ ಮಾತಿನ ಅರ್ಥ ಇಷ್ಟೇ: ಒಂದು ದಿನದಲ್ಲಿ ನಮಗೆ
ಸಿಗುವ 86,400 ಸೆಕೆಂಡುಗಳು ಇವೆಯಲ್ಲ, ಅವುಗಳಿಗೆ
ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿ
ಒಂದೊಂದು ಕ್ಷಣವನ್ನೂ ಉತ್ಕಟವಾಗಿ ಪ್ರೀತಿಸಿ.
ನಾಳೆಯ ಬಗ್ಗೆ ಚಿಂತಿಸುವ ಬದಲು,
ಇಂದು ಸಿಕ್ಕಿರುವ
ಅವಕಾಶಗಳನ್ನು ನೆನೆದು ಖುಷಿಪಡಿ.
ಹೌದು, ಲೈಫು ಇಷ್ಟೇನೇ, ಲೈಫು ಹೀಗೇನೆ…
** ** ** ** ** ** **
”ಅದೊಂದು ಭಾರೀ ಬಹುಮಾನದ
ಸ್ಪರ್ಧೆ. ಗೆದ್ದವರ ಬ್ಯಾಂಕ್ ಅಕೌಂಟ್್ಗೆ ದಿನವೂ 86,400
ಅಮೆರಿಕನ್ ಡಾಲರ್ (ನಮ್ಮ ರೂಪಾಯಿಗಳ ಲೆಕ್ಕದಲ್ಲಿ
41.5 ಲಕ್ಷ) ಹಣವನ್ನು ಪ್ರತಿ
ದಿನವೂ ಹಾಕುವುದಾಗಿ
ಸ್ಪರ್ಧೆಯನ್ನು ಹಮ್ಮಿಕೊಂಡ ಕಂಪನಿ
ಘೋಷಿಸಿರುತ್ತದೆ. ಹಣದ ಮೇಲಿನ ಆಸೆಯಿಂದ
ಸ್ಪರ್ಧೆಯಲ್ಲಿ ನೀವೂ ಪಾಲ್ಗೊಳ್ಳುತ್ತೀರಿ.
ಆಗಲೇ, ಗೆಲುವೆಂಬುದು ನಿರಾಯಾಸವಾಗಿ ನಿಮ್ಮ
ಕೈ ಹಿಡಿದುಬಿಡುತ್ತದೆ. ಮರುದಿನದಿಂದಲೇ ನಿಮ್ಮ
ಬ್ಯಾಂಕ್ ಖಾತೆಗೆ 84,400 ಡಾಲರ್
ಹಣವನ್ನು ಹಾಕುವ ಕೆಲಸ ಆರಂಭವಾಗಬೇಕು. ಆ
ಸಂದರ್ಭದಲ್ಲಿ ಸ್ಪರ್ಧೆಯನ್ನು ಹಮ್ಮಿಕೊಂಡ ಸಂಸ್ಥೆ
ಐದು ಷರತ್ತುಗಳನ್ನು ಹಾಕುತ್ತದೆ. ಆ
ನಿಬಂಧನೆಗಳು ಹೀಗಿರುತ್ತವೆ:
1. ನಿಮ್ಮ ಅಕೌಂಟ್ ಗೆ ಹಾಕುವ 86,400 ಡಾಲರ್
ಹಣವನ್ನು ಅವತ್ತಿನದನ್ನು ಅವತ್ತೇ ಖರ್ಚು
ಮಾಡಿಬಿಡಬೇಕು. ನೀವೇನಾದರೂ ಬಾಕಿ
ಉಳಿಸಿದರೆ, ಅದನ್ನೆಲ್ಲ ಮುಲಾಜಿಲ್ಲದೆ ವಾಪಸ್
ಪಡೆಯಲಾಗುತ್ತದೆ.
2. ನಿಮಗೆ ಕೊಡುವ ಬಹುಮಾನದ
ಹಣವನ್ನು ನೀವು ಇನ್ನೊಬ್ಬರ ಅಕೌಂಟ್ ಗೆ
ವರ್ಗಾಯಿಸುವಂತಿಲ್ಲ.
3. ಬಹುಮಾನದ ರೂಪದಲ್ಲಿ ಬ್ಯಾಂಕ್ ಖಾತೆಗೆ
ದಿನದಿನ ಬಂದು ಬೀಳುವ ಅಷ್ಟೂ ಹಣಕ್ಕೆ
ನೀವು ಮಾತ್ರ ವಾರಸುದಾರರು.
3. ಪ್ರತಿ ದಿನವೂ ನೀವು ಹಾಸಿಗೆಯಿಂದ ಎದ್ದ
ತಕ್ಷಣವೇ, ಆ ದಿನದ ಮೊತ್ತವಾಗಿ ನಿಮ್ಮ ಅಕೌಂಟ್್ಗೆ
86,400 ಡಾಲರ್ ಹಣ ಸಂದಾಯವಾಗಿದೆ
ಎಂದು ತಿಳಿಸುವ ವ್ಯವಸ್ಥೆ ಮಾಡಲಾಗಿರುತ್ತದೆ.
4. ಯಾವುದೇ ರೀತಿಯ
ಮುನ್ಸೂಚನೆಯನ್ನೂ ಕೊಡದೆ ಈ ಬಹುಮಾನ
ನೀಡಿಕೆ ಯೋಜನೆಯನ್ನು ದಿಢೀರ್ ನಿಲ್ಲಿಸುವ
ಹಕ್ಕು ಬ್ಯಾಂಕ್್ಗಿರುತ್ತದೆ. ಯಾವ ಹೊತ್ತಿನಲ್ಲಿ
ಬೇಕಾದರೂ”ಅದು ಆಟ ನಿಲ್ಲಿಸಬಹುದು’
ಅದನ್ನು ಮೊದಲೇ ತಿಳಿಯುವ ಅಥವಾ ಪ್ರಶ್ನಿಸುವ
ಹಕ್ಕು ನಿಮಗಿರುವುದಿಲ್ಲ…
ಇಂಥದೊಂದು ಸಂದರ್ಭ ಅಕಸ್ಮಾತ್
ಎದುರಾಗಿಬಿಟ್ಟರೆ ಏನು ಮಾಡುತ್ತೀರಿ ಹೇಳಿ;
ಮೊದಲು ಮನೆ, ಕಾರು, ಜಮೀನು, ಚಿನ್ನ,
ಸೈಟು… ಹೀಗೆ ಏನೇನು ಬೇಕೋ ಅದನ್ನೆಲ್ಲ
ಖರೀದಿಸಿಬಿಡುತ್ತೀರಿ. ಇಂಥ ಎಲ್ಲ
ಖರೀದಿಯೂ ಕೇವಲ ಒಂದು ವಾರದಲ್ಲಿ ದಕ್ಕುವ
ಬಹುಮಾನದಿಂದಲೇ ಸಾಧ್ಯವಾಗಿಬಿಡುತ್ತದೆ. ಆಗ
ನೀವೇನು ಮಾಡುತ್ತೀರಿ ಹೇಳಿ: ನಿಧಾನವಾಗಿ
ಬಂಧುಗಳ ಕಡೆಗೆ ತಿರುಗುತ್ತೀರಿ.
ಹಣವೆಂಬುದು ಮೂಟೆಗಟ್ಟಲೆ ಬಂದು ಬೀಳುತ್ತಿದೆ.
ಖರ್ಚು ಮಾಡದೇ ಹೋದರೆ, ಅವತ್ತೇ ವಾಪಸ್
ಹೋಗಿಬಿಡುತ್ತದೆ ಎಂಬುದು ಗ್ಯಾರಂಟಿ
ಆಗಿರುವುದರಿಂದ, ಕೆಲವೊಂದು ಬಾರಿ
ಅಪರಿಚಿತರಿಗೂ ಅವರು ಕೇಳಿದ್ದನ್ನು ಕೊಡಿಸಲು
ಪ್ರಯತ್ನಿಸುತ್ತೇವೆ. ಅದೊಂದು ದಿನ ನಮ್ಮಿಂದ
ಏನನ್ನೂ ಪಡೆಯುವವರೇ ಇಲ್ಲವಾದಾಗ-
ಅಯ್ಯೋ, ಇವತ್ತು ಅನ್ಯಾಯವಾಗಿ 86,400
ಡಾಲರ್ ವೇಸ್ಟ್
ಆಗಿಬಿಡ್ತು ಎಂದು ಹತಾಶರಾಗುತ್ತೇವೆ.
ಡಿಯರ್ ಫ್ರೆಂಡ್ಸ್, ಈಗ ಹುಶಾರಾಗಿ ಕೇಳಿಸಿಕೊಳ್ಳಿ.:
ದಿನದಿನವೂ 86,400 ಡಾಲರ್ ಗಳನ್ನು ಗೆಲ್ಲುವ
ಸ್ಪರ್ಧೆಯಲ್ಲಿ ನಾವೆಲ್ಲರೂ ಇದ್ದೇವೆ. ಗೆಲ್ಲುವ
ಅವಕಾಶ ನಮ್ಮಲ್ಲಿ ಎಲ್ಲರಿಗೂ ಇದೆ. ಅಂದಹಾಗೆ, ಈ
ಸ್ಪರ್ಧೆಯನ್ನು ಹಮ್ಮಿಕೊಂಡಿರುವ ಸಂಸ್ಥೆಗೆ”ಕಾಲ’
ಎಂಬ ಹೆಸರಿದೆ. ಈ ಒಗಟಿನಂಥ ಕಥೆಯನ್ನು ಸರಳವಾಗಿ
ಹೇಳುವುದಾದರೆ ಅದು ಹೀಗೆ:
1. ಪ್ರತಿ ದಿನವೂ ಹಾಸಿಗೆಯಿಂದ ಏಳುತ್ತೇವಲ್ಲ?
ಆಗ 86,400 ಸೆಕೆಂಡುಗಳ ಅವಧಿ ಜೀವಿಸಲು ಇರುವ
ಬಹುಮಾನದ ಹಣದಂತೆ ನಮಗೆ ದಕ್ಕುತ್ತದೆ.
2. 86,400 ಸೆಕೆಂಡುಗಳ ಸಂಭ್ರಮವನ್ನೂ ರಾತ್ರಿ
ನಿದ್ರೆಗೆ ಜಾರುವುದರೊಳಗೆ
ನಾವು ಬಳಸಿಕೊಳ್ಳಬೇಕು. ಇಲ್ಲವಾದರೆ
ಅದು ಲೆಕ್ಕಕ್ಕೆ ಸಿಗದೆ ಮಾಯವಾಗುತ್ತದೆ.
3. ಕಳೆದುಹೋದ “ನಿನ್ನೆ’ ಎಂದಿಗೂ ಮರಳಿ
ಸಿಗುವುದಿಲ್ಲ.
4. ಇವತ್ತೇ ಕಡೆಯ
ದಿನವೇನೋ ಎಂದುಕೊಂಡೇ ಕ್ಷಣಕ್ಷಣವನ್ನೂ
ಖುಷಿಯಿಂದ ಬದುಕಬೇಕು.
5. ಪ್ರತಿ ಮುಂಜಾನೆಯೂ ನಮ್ಮ ಬದುಕಿನ ಅಕೌಂಟ್್ಗೆ
86,400 ಸೆಕೆಂಡುಗಳ ಸಂಭ್ರಮ ಬಂದು ಬೀಳುತ್ತೆ
ನಿಜ. ಆದರೆ, ಅದನ್ನು ಕಾಲ ಎಂಬ ನಿರ್ದಯ ಯಾವ
ಕ್ಷಣದಲ್ಲಿ ಬೇಕಾದರೂ ನಮ್ಮಿಂದ
ಕಿತ್ತುಕೊಳ್ಳಬಹುದು!
ಈ ಮಾತಿನ ಅರ್ಥ ಇಷ್ಟೇ: ಒಂದು ದಿನದಲ್ಲಿ ನಮಗೆ
ಸಿಗುವ 86,400 ಸೆಕೆಂಡುಗಳು ಇವೆಯಲ್ಲ, ಅವುಗಳಿಗೆ
ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿ
ಒಂದೊಂದು ಕ್ಷಣವನ್ನೂ ಉತ್ಕಟವಾಗಿ ಪ್ರೀತಿಸಿ.
ನಾಳೆಯ ಬಗ್ಗೆ ಚಿಂತಿಸುವ ಬದಲು,
ಇಂದು ಸಿಕ್ಕಿರುವ
ಅವಕಾಶಗಳನ್ನು ನೆನೆದು ಖುಷಿಪಡಿ.
ಹೌದು, ಲೈಫು ಇಷ್ಟೇನೇ, ಲೈಫು ಹೀಗೇನೆ…
** ** ** ** ** ** **
No comments:
Post a Comment